ನಿನ್ನ ನೆನಪಲ್ಲಿ ನಮ್ಮ ಬದುಕು
ಹಸನಾಯಿತು ಓ ಚೇತನವೇ
ಚೈತ್ರದ ಚಿಗುರಿನಂತೆ
ಕೋಟಿ ಹ್ರದಯವ ಮೀಟಿ
ಕಹಳೆಯೂದಿದೆ ನೀನು
ದೇಶಭಕ್ತಿ ಸ್ಪುರಿಸುವಂತೆ
ಅರಳಿತು ನಮ್ಮೀ ಬದುಕು
ನಿನ್ನಾಗಮನದಿಂದ
ಕತ್ತಲ ದಾರಿಗೆ ಬೆಳಕ ಸೊಡರ ಹಿಡಿದಂತೆ
ಕುಣಿಕುಣಿಯಿತೆಮ್ಮ ಹ್ರದಯ
ಸ್ವಾತಂತ್ರದ ಕಂಪು ತಂದಾಗ ನೀ
ನವೀನ ಪತಥವ ತುಳಿದಂತೆ
ಓಲಾಡಿತು ನಮ್ಮೀ ತನುವು
ಆಶಾಕಿರಣವಾಗಿ ನೀ ಬರಲು
ಬದುಕುವ ಹೊಸ ಉತ್ಸಾಹ ಹುಟ್ಟಿದಂತೆ
ನಿಮ್ಮ ಹೋರಾಟದಲಿ ನಮ್ಮ ಬಾಳು
ಹಸನಾಯಿತು
ಪುಟವಿಟ್ಟ ಬಂಗಾರದಂತೆ
ನಿಮ್ಮೊಲವಿನ ಮುಂಗಾರಿನಲಿ
ನಲಿಯುತಿರುವ ನಾವುಗಳು
ಫಸಲುಟ್ಟ ಭೂಮಿಯಂತೆ
(ಗಾಂದಿಜಿಯ ಆದರ್ಶಗಳು, ಸ್ವಾತಂತ್ರ್ಯಕ್ಕಾಗಿ ಅವರ ಅಹಿಂಸಾ ಚಳುವಳಿಗಳು, ಅವರ ರಾಮ ರಾಜ್ಯದ ಕಲ್ಪನೆಗಳು, ಸದ್ರಢಸುಸಂಸ್ಕ್ರತ ಭಾರತದ ಪ್ರತಿಪಲವೇ ಆಗಬೇಕು ಎನ್ನುವುದೇ ಕವನದ ಆಶಯ)
ಸೋಮವಾರ, ಮೇ 24, 2010
ಬರ
ವಿಷಾನಿಲಗಳ ಅಭಿಷೇಕಕೆ
ಬರಡಾಯಿತು ನೆಲವು
ಧಗೆಯೆದ್ದಿದೆ ಹ್ರದಯಗಳಲ್ಲಿ
ಬರಿದಾಯಿತು ಒಲವು
ಬಾಯಾರಿದ ಬಯಕೆಗಳಲ್ಲಿ
ಒತ್ತರಿಸಿದ ಕಣ್ಣಿರು
ಕಣ್ಣಿಗೆ ರಪ್ಪನೆ ಕೊರೈಸುತಿದೆ
ನೆಲದಲಿ ಬಿಸಿಯುಸಿರು
ಮೈಮನಗಳ ಕೊಂಬೆಯಲಿ
ಹೊಗೆಯಾಡುತಿದೆ ನೋವು
ಬಾಡುತಿದೆ ನಾಳೆಗೆ
ನನಸಾಗುವ ಹೂವು
ಬರವಸೆಯ ಹೊಳಗಳಲಿ
ರುಧಿರ ಧಾರೆಯ ಹೊನಲು
ಕವನವಗದು ಇಲ್ಲಿ
ಬತ್ತುತೆದೆ ಕಲ್ಪನೆಯ ಕಡಲು
(ಜಾಗತೀಕರಣ ಮತ್ತು ಉದಾರೀಕರಣದ ನೀತಿಯಿಂದಾಗಿ ಇವತ್ತು ಭಾರತದ ಬೆನ್ನೆಲುಬು ಮತ್ತು ಬಹುಸಂಖ್ಯಾ ಜನರ ಪ್ರಮುಕ
ಉದ್ಯೋಗವಾಗಿರುವ ಕ್ರಷಿಭೂಮಿ ಇಂದು ವಿಷಾಲಿನದ ಪಾತ್ರೆಯಗಿದೆ. ಅದಿಕ ಬೆಳೆಯ ಆಶೆಗೆ ರೈತ ಸಾಂಪ್ರದಾಯಕವಾಗಿಬಳಸುತ್ತಿದ್ದ ಸಾವಯವ ಗೊಬ್ಬರಗಳನ್ನು ಬಿಟ್ಟು ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಸಕ ಬಳಸುತ್ತಿರುವ ಪರಿಣಾಮವಾಗಿಇವತ್ತು ಭೂಮಿ ತನ್ನ ಪಲವತ್ತತೆಯನ್ನು ಕಳೆದುಕೊಂಡು ಬಂಜರಾಗಿದೆ. ಇನ್ನಾದರೂ ರೈತ ಸಾವಯವ ಗೊಬ್ಬರದ ಮಹತ್ವತಿಳಿಯಲಿ ಎಂಬುದೇ ಕವನದ ಆಶಯ )
ಬರಡಾಯಿತು ನೆಲವು
ಧಗೆಯೆದ್ದಿದೆ ಹ್ರದಯಗಳಲ್ಲಿ
ಬರಿದಾಯಿತು ಒಲವು
ಬಾಯಾರಿದ ಬಯಕೆಗಳಲ್ಲಿ
ಒತ್ತರಿಸಿದ ಕಣ್ಣಿರು
ಕಣ್ಣಿಗೆ ರಪ್ಪನೆ ಕೊರೈಸುತಿದೆ
ನೆಲದಲಿ ಬಿಸಿಯುಸಿರು
ಮೈಮನಗಳ ಕೊಂಬೆಯಲಿ
ಹೊಗೆಯಾಡುತಿದೆ ನೋವು
ಬಾಡುತಿದೆ ನಾಳೆಗೆ
ನನಸಾಗುವ ಹೂವು
ಬರವಸೆಯ ಹೊಳಗಳಲಿ
ರುಧಿರ ಧಾರೆಯ ಹೊನಲು
ಕವನವಗದು ಇಲ್ಲಿ
ಬತ್ತುತೆದೆ ಕಲ್ಪನೆಯ ಕಡಲು
(ಜಾಗತೀಕರಣ ಮತ್ತು ಉದಾರೀಕರಣದ ನೀತಿಯಿಂದಾಗಿ ಇವತ್ತು ಭಾರತದ ಬೆನ್ನೆಲುಬು ಮತ್ತು ಬಹುಸಂಖ್ಯಾ ಜನರ ಪ್ರಮುಕ
ಉದ್ಯೋಗವಾಗಿರುವ ಕ್ರಷಿಭೂಮಿ ಇಂದು ವಿಷಾಲಿನದ ಪಾತ್ರೆಯಗಿದೆ. ಅದಿಕ ಬೆಳೆಯ ಆಶೆಗೆ ರೈತ ಸಾಂಪ್ರದಾಯಕವಾಗಿಬಳಸುತ್ತಿದ್ದ ಸಾವಯವ ಗೊಬ್ಬರಗಳನ್ನು ಬಿಟ್ಟು ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಸಕ ಬಳಸುತ್ತಿರುವ ಪರಿಣಾಮವಾಗಿಇವತ್ತು ಭೂಮಿ ತನ್ನ ಪಲವತ್ತತೆಯನ್ನು ಕಳೆದುಕೊಂಡು ಬಂಜರಾಗಿದೆ. ಇನ್ನಾದರೂ ರೈತ ಸಾವಯವ ಗೊಬ್ಬರದ ಮಹತ್ವತಿಳಿಯಲಿ ಎಂಬುದೇ ಕವನದ ಆಶಯ )
ಭಾನುವಾರ, ಮೇ 23, 2010
ಮಲೆನಾಡಿನ ಮಳೆಹಾಡು
ಹಾಡು ಹಗಲಲ್ಲೇ ಕತ್ತಲಾವರಿಸಿದಂತೆ
ಭುವಿ ಬಾನು ಒಂದಾಗಿಸುವ ಮಳೆ
ಬಣ್ಣ ಬಣ್ಣದ ಕೊಡೆಗಳ ಮಾಟ
ಅಲ್ಲಲ್ಲಿ ಗೊರಬೆಗಳ ನೋಟ
ನಗರದ ಜನಜೀವನಕ್ಕಿದು ಅಸ್ತವ್ಯಸ್ತ
'ರೇನ್ ವಾಟ್ ನಾನ್ಸೆನ್ಸ್' ಅಂತೆಲ್ಲ
ಹೈ ಪೈ ಗಳಿಂದ ಬೈಸಿಕೊಳ್ಳುವ ವರುಣ
ರಾಜಧಾನಿಯಿಂದ ಮರೆಯಾಗಿ ಕಂಡುಕೊಳ್ಳುವುದು
ಮಲೆನಾಡಿನಲ್ಲಿಯೇ ಅದರ ಅಸ್ತಿತ್ವ
ಮಾರ್ಚ್, ಎಪ್ರಿಲ್, ಮೇ
ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು
ಮಹಾನಗರಗಳಿಗೆ ಟೂರು ಹೋಗುವುದು ನೋಡಿ
ಎಲ್ಲಿ ಸುತ್ತಾಡಿದರು ಕೊನೆಗೆ
ಜೂನ್, ಅಗಸ್ಟ್ ವರೆಗೆ
ಚಿಕ್ಕಮಗಳೂರು,ಶಿವಮೊಗ್ಗದಂತ
ಮಲೆ ಪ್ರದೇಶಗಳಲ್ಲೇ ಠಿಕಾಣಿ ಹೂಡುವುದು ರೂಡಿ
ಮಳೆ ಇಲ್ಲದಿದ್ದರೆ ಮಲೆನಾಡಿಗೆ
ಯಾರಿಗೂ ಬೇಡ ಅವರ ಪಾಡು
ಅಲ್ಲಿ ಮಲೆಹಾಡಿನ ಬದಲಿಗೆ ಗೋಳಿನ ಹಾಡು
ಬಿಳುತ್ತಿರುವಂತೆಯೇ ಒಂದೆರಡು ಮಳೆ
ಅಟ್ಟದ ಮೇಲಿಂದ ವರ್ಷದ ಹಿಂದೆ ಇಟ್ಟಿದ್ದ
ದೂಳು ಮೆತ್ತಿದ್ದ ಕೊಡೆ ಈಚೆಗೆ ಬರುತ್ತದೆ
ಬಟನ್ ಶೂ, ರೇನ್ ಕೊಟ್ ಗಳೆಲ್ಲ
ಹಳ್ಳಿಯ ಹೈಟೆಕ್ ಗಳಾಗಿ ಕಂಗೊಳಿಸುತ್ತವೆ
ಮಳೆಯ ನಡುವೆ ವಿಜ್ರಂಬಿಸುತ್ತವೆ ತರುಣರಲ್ಲಿ
ಗೊರಬೆ, ಪ್ಲಾಸ್ಟಿಕ್ ಹಾಳೆ, ಮಟ್ಟಾಳೆ ಗಳಂತ
ಹಳೆಯ ಪಳೆಯುಳಿಕೆಗಳು ಇಂದಿಗೂ
ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ ಹಳಬರಲ್ಲಿ
ಭೂರಮೆಯ ಒಡಲೊಳಗೆ ಪ್ರೀತಿಯ ಸಿಹಿ ಚುಂಬನ
ಕಾಡಿನ ಮರಗಳಲ್ಲಿ ಮಳೆನೀರು ಅಮ್ರತ ಸಿಂಚನ
ಜೀರುಂಡೆಗಳ ಕೂಗು ಮಳೆ ಬರುವ ಸಿಗ್ನಲ್
ಬಬ್ಬರಿಗಳು ನುಡಿಸುವುದು ಗದ್ದಲದ ವಾದ್ಯ
ಕಪ್ಪೆಗಳ ವಟವಟ ಮರಕುಟಕದ ಕಟಕಟ
ಮುಂಗಾರಿನ ಮೋಡಕ್ಕೆ ಕುಣಿಯುವ
ನವಿಲುಗಳ ಪ್ಯಾಶನ್ ಪ್ರದರ್ಶನ
ಅಜ್ಜನಿಗೆ ಬೇಕು ಒಂದಿಸ್ಟು ನಶ್ಯ
ಬಿಸಿ ಇನ್ನು ಬೇಕಿದ್ದರೆ ಹಾಕಬಹುವುದು
ಒಂದೆರೆಡು ಪೆಗ್ ಅದು ಬೇರೆ ವಿಷ್ಯ
ಅಜ್ಜೆ ಮಾತ್ರ ಈಚೆಗೆ ಬರಲಾರಳು
ಒಲೆ ಮುಂದಿನ ಬೆಂಕಿಯಿಂದ
ಇಲೆಕ್ಟ್ರಿಕ್ ಓವನ್, ಗ್ಯಾಸ್ ಸ್ಟವ್ ಅದೆಸ್ಟು ಬಂದರೂ
ಮಲೆನಾಡಿನ ಅಜ್ಜಿಗೆ ಕೂರಬೇಕು ಆ
ಹಳೆಕಾಲದ ಬೆಂಕಿ ಒಲೆಯ ಮುಂದೆ
ಒಲೆಗೆ ಹಾಕಿದರೆ ಹಲಸಿನಕಾಯಿ ಬೀಜ
ತಿಂದರೆ ಆಹಾ! ಎಂತಾ ಮಜಾ
ಇಂತ ರುಚಿ ನಗರದ ಪಿಜ್ಜಕ್ಕೆಲ್ಲುಂಟು?
ಹಪ್ಪಳದ ಸವಿ ಯಾರಿಗೆಲ್ಲ ಗೊತ್ತು
ಸಂಡಿಗೆ, ಬಾಳಕ, ಹಲಸಿನ ಕಡುಬು
ಪತ್ರೋಡೆ, ಹುರುಳಿ ಸಾರು ಬಾಯೂರುವುದು ನೀರು
ಮಾವಿನ ಮಿಡಿ ಉಪ್ಪಿನಕಾಯಿ,
ಜೀರಿಗೆಯ ಕಷಾಯಿ
ಬೇಡ ಬಿಡಿ ಯಾಕೆ ಸುಮ್ಮನೆ
ನಿಮ್ಮ ಹೊಟ್ಟೆ ಉರಿಸುವುದು
ಗುಡುಗು ಸಿಡಿಲು ಮಿಂಚಿನ ಆರ್ಭಟ
ಅವು ಚಂಡೆ ಮದ್ದಲೆಗಳಿದ್ದಂತೆ
ಸದ್ದಿಡುವ ದಿನಗಳಲ್ಲಿ ಬೆಳಕು
ಹರಿಯುವುದೇ ಇಲ್ಲವೆಂಬಂತೆ
ಕತ್ತಲು ಆವರಿಸಿದ ಹೊತ್ತು
ನಾಲ್ಕು ಕಂಬಳಿ ಹೊದ್ದು ಮಲಗಿದರೆ
ಗುಡುಗನ್ನು ನಾಚಿಸುವ ಬೀಕರ ಗೊರಕೆ
ಮಳೆಯ ಅಂದ ಮಲೆನಾಡಿನಲ್ಲಿಯೇ ಚಂದ
ಹಳ್ಳಿಗರಿಗೆ ಅದು ಸಂಭ್ರಮದಾನಂದ
ಕಾನನದ ಸೌಂದರ್ಯ ರಾಶಿ ಸವಿದವರಿಗಷ್ಟೇ ಗೊತ್ತು
ನಗರಿಗರಿಗೆ ಎಲ್ಲುಂಟು ಈ ಭಾಗ್ಯ ಇವತ್ತು
(ಮಳೆ ಬಂತೆಂದರೆ ಮಲೆನಾಡಿನಲ್ಲಿ ಹೊಸ ಜಗತ್ತೊಂದು ತೆರೆದುಕೊಳ್ಳುತ್ತದೆ ಮಳೆಯೊಂದಿಗೆ ಅಲ್ಲಿಯ ಜನಜೀವನ , ಸಂಪ್ರದಾಯ, ಸಂಸ್ಕ್ರತಿಗಳು ವೈಶಿಷ್ಟ್ಯತೆಯನ್ನು ಪಡೆದುಕೊಳ್ಳುತ್ತದೆ. ಆದರೆ ನಗರಗಳಲ್ಲಿ ಇದು ಅಸಾದ್ಯ .ನಗರವಾಸಿಗಳ ಜನರ ಬದುಕು ಇಂದು ಯಾಂತ್ರಿಕವಾಗಿದೆ. ಜಾಗತೀಕರಣದ ಪರಿಣಾಮವಾಗಿ ಇದು ಇಂದು ಹಳ್ಳಿಯನ್ನು ಪ್ರವೆಸಿಸುತ್ತಿರುವುದು ವಿಷಾದದ ಸಂಗತಿಯಾಗಿದೆ , ಹಳ್ಳಿಯ ಸೊಗಡು, ಹಳ್ಳಿಯ ಜೀವನ, ಪ್ರಕ್ರತಿಯೊಂದಿಗಿನ ಆ ಬಾಂದವ್ಯ ನಗರವಾಸಿಗಳಿಗೆ ಎಲ್ಲಿ ಸಾದ್ಯ? ಪ್ರಕ್ರತಿಯೊಂದಿಗಿನ ಹೊರತಾದ ಬದುಕೂ ಒಂದು ಬದುಕೇ?)
ಭುವಿ ಬಾನು ಒಂದಾಗಿಸುವ ಮಳೆ
ಬಣ್ಣ ಬಣ್ಣದ ಕೊಡೆಗಳ ಮಾಟ
ಅಲ್ಲಲ್ಲಿ ಗೊರಬೆಗಳ ನೋಟ
ನಗರದ ಜನಜೀವನಕ್ಕಿದು ಅಸ್ತವ್ಯಸ್ತ
'ರೇನ್ ವಾಟ್ ನಾನ್ಸೆನ್ಸ್' ಅಂತೆಲ್ಲ
ಹೈ ಪೈ ಗಳಿಂದ ಬೈಸಿಕೊಳ್ಳುವ ವರುಣ
ರಾಜಧಾನಿಯಿಂದ ಮರೆಯಾಗಿ ಕಂಡುಕೊಳ್ಳುವುದು
ಮಲೆನಾಡಿನಲ್ಲಿಯೇ ಅದರ ಅಸ್ತಿತ್ವ
ಮಾರ್ಚ್, ಎಪ್ರಿಲ್, ಮೇ
ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು
ಮಹಾನಗರಗಳಿಗೆ ಟೂರು ಹೋಗುವುದು ನೋಡಿ
ಎಲ್ಲಿ ಸುತ್ತಾಡಿದರು ಕೊನೆಗೆ
ಜೂನ್, ಅಗಸ್ಟ್ ವರೆಗೆ
ಚಿಕ್ಕಮಗಳೂರು,ಶಿವಮೊಗ್ಗದಂತ
ಮಲೆ ಪ್ರದೇಶಗಳಲ್ಲೇ ಠಿಕಾಣಿ ಹೂಡುವುದು ರೂಡಿ
ಮಳೆ ಇಲ್ಲದಿದ್ದರೆ ಮಲೆನಾಡಿಗೆ
ಯಾರಿಗೂ ಬೇಡ ಅವರ ಪಾಡು
ಅಲ್ಲಿ ಮಲೆಹಾಡಿನ ಬದಲಿಗೆ ಗೋಳಿನ ಹಾಡು
ಬಿಳುತ್ತಿರುವಂತೆಯೇ ಒಂದೆರಡು ಮಳೆ
ಅಟ್ಟದ ಮೇಲಿಂದ ವರ್ಷದ ಹಿಂದೆ ಇಟ್ಟಿದ್ದ
ದೂಳು ಮೆತ್ತಿದ್ದ ಕೊಡೆ ಈಚೆಗೆ ಬರುತ್ತದೆ
ಬಟನ್ ಶೂ, ರೇನ್ ಕೊಟ್ ಗಳೆಲ್ಲ
ಹಳ್ಳಿಯ ಹೈಟೆಕ್ ಗಳಾಗಿ ಕಂಗೊಳಿಸುತ್ತವೆ
ಮಳೆಯ ನಡುವೆ ವಿಜ್ರಂಬಿಸುತ್ತವೆ ತರುಣರಲ್ಲಿ
ಗೊರಬೆ, ಪ್ಲಾಸ್ಟಿಕ್ ಹಾಳೆ, ಮಟ್ಟಾಳೆ ಗಳಂತ
ಹಳೆಯ ಪಳೆಯುಳಿಕೆಗಳು ಇಂದಿಗೂ
ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ ಹಳಬರಲ್ಲಿ
ಭೂರಮೆಯ ಒಡಲೊಳಗೆ ಪ್ರೀತಿಯ ಸಿಹಿ ಚುಂಬನ
ಕಾಡಿನ ಮರಗಳಲ್ಲಿ ಮಳೆನೀರು ಅಮ್ರತ ಸಿಂಚನ
ಜೀರುಂಡೆಗಳ ಕೂಗು ಮಳೆ ಬರುವ ಸಿಗ್ನಲ್
ಬಬ್ಬರಿಗಳು ನುಡಿಸುವುದು ಗದ್ದಲದ ವಾದ್ಯ
ಕಪ್ಪೆಗಳ ವಟವಟ ಮರಕುಟಕದ ಕಟಕಟ
ಮುಂಗಾರಿನ ಮೋಡಕ್ಕೆ ಕುಣಿಯುವ
ನವಿಲುಗಳ ಪ್ಯಾಶನ್ ಪ್ರದರ್ಶನ
ಅಜ್ಜನಿಗೆ ಬೇಕು ಒಂದಿಸ್ಟು ನಶ್ಯ
ಬಿಸಿ ಇನ್ನು ಬೇಕಿದ್ದರೆ ಹಾಕಬಹುವುದು
ಒಂದೆರೆಡು ಪೆಗ್ ಅದು ಬೇರೆ ವಿಷ್ಯ
ಅಜ್ಜೆ ಮಾತ್ರ ಈಚೆಗೆ ಬರಲಾರಳು
ಒಲೆ ಮುಂದಿನ ಬೆಂಕಿಯಿಂದ
ಇಲೆಕ್ಟ್ರಿಕ್ ಓವನ್, ಗ್ಯಾಸ್ ಸ್ಟವ್ ಅದೆಸ್ಟು ಬಂದರೂ
ಮಲೆನಾಡಿನ ಅಜ್ಜಿಗೆ ಕೂರಬೇಕು ಆ
ಹಳೆಕಾಲದ ಬೆಂಕಿ ಒಲೆಯ ಮುಂದೆ
ಒಲೆಗೆ ಹಾಕಿದರೆ ಹಲಸಿನಕಾಯಿ ಬೀಜ
ತಿಂದರೆ ಆಹಾ! ಎಂತಾ ಮಜಾ
ಇಂತ ರುಚಿ ನಗರದ ಪಿಜ್ಜಕ್ಕೆಲ್ಲುಂಟು?
ಹಪ್ಪಳದ ಸವಿ ಯಾರಿಗೆಲ್ಲ ಗೊತ್ತು
ಸಂಡಿಗೆ, ಬಾಳಕ, ಹಲಸಿನ ಕಡುಬು
ಪತ್ರೋಡೆ, ಹುರುಳಿ ಸಾರು ಬಾಯೂರುವುದು ನೀರು
ಮಾವಿನ ಮಿಡಿ ಉಪ್ಪಿನಕಾಯಿ,
ಜೀರಿಗೆಯ ಕಷಾಯಿ
ಬೇಡ ಬಿಡಿ ಯಾಕೆ ಸುಮ್ಮನೆ
ನಿಮ್ಮ ಹೊಟ್ಟೆ ಉರಿಸುವುದು
ಗುಡುಗು ಸಿಡಿಲು ಮಿಂಚಿನ ಆರ್ಭಟ
ಅವು ಚಂಡೆ ಮದ್ದಲೆಗಳಿದ್ದಂತೆ
ಸದ್ದಿಡುವ ದಿನಗಳಲ್ಲಿ ಬೆಳಕು
ಹರಿಯುವುದೇ ಇಲ್ಲವೆಂಬಂತೆ
ಕತ್ತಲು ಆವರಿಸಿದ ಹೊತ್ತು
ನಾಲ್ಕು ಕಂಬಳಿ ಹೊದ್ದು ಮಲಗಿದರೆ
ಗುಡುಗನ್ನು ನಾಚಿಸುವ ಬೀಕರ ಗೊರಕೆ
ಮಳೆಯ ಅಂದ ಮಲೆನಾಡಿನಲ್ಲಿಯೇ ಚಂದ
ಹಳ್ಳಿಗರಿಗೆ ಅದು ಸಂಭ್ರಮದಾನಂದ
ಕಾನನದ ಸೌಂದರ್ಯ ರಾಶಿ ಸವಿದವರಿಗಷ್ಟೇ ಗೊತ್ತು
ನಗರಿಗರಿಗೆ ಎಲ್ಲುಂಟು ಈ ಭಾಗ್ಯ ಇವತ್ತು
(ಮಳೆ ಬಂತೆಂದರೆ ಮಲೆನಾಡಿನಲ್ಲಿ ಹೊಸ ಜಗತ್ತೊಂದು ತೆರೆದುಕೊಳ್ಳುತ್ತದೆ ಮಳೆಯೊಂದಿಗೆ ಅಲ್ಲಿಯ ಜನಜೀವನ , ಸಂಪ್ರದಾಯ, ಸಂಸ್ಕ್ರತಿಗಳು ವೈಶಿಷ್ಟ್ಯತೆಯನ್ನು ಪಡೆದುಕೊಳ್ಳುತ್ತದೆ. ಆದರೆ ನಗರಗಳಲ್ಲಿ ಇದು ಅಸಾದ್ಯ .ನಗರವಾಸಿಗಳ ಜನರ ಬದುಕು ಇಂದು ಯಾಂತ್ರಿಕವಾಗಿದೆ. ಜಾಗತೀಕರಣದ ಪರಿಣಾಮವಾಗಿ ಇದು ಇಂದು ಹಳ್ಳಿಯನ್ನು ಪ್ರವೆಸಿಸುತ್ತಿರುವುದು ವಿಷಾದದ ಸಂಗತಿಯಾಗಿದೆ , ಹಳ್ಳಿಯ ಸೊಗಡು, ಹಳ್ಳಿಯ ಜೀವನ, ಪ್ರಕ್ರತಿಯೊಂದಿಗಿನ ಆ ಬಾಂದವ್ಯ ನಗರವಾಸಿಗಳಿಗೆ ಎಲ್ಲಿ ಸಾದ್ಯ? ಪ್ರಕ್ರತಿಯೊಂದಿಗಿನ ಹೊರತಾದ ಬದುಕೂ ಒಂದು ಬದುಕೇ?)
ಶುಕ್ರವಾರ, ಮೇ 21, 2010
ಸಮಯವಿಲ್ಲ
ಸಮಯವಿಲ್ಲ
ದೋ ಎಂದು ಸುರಿಯುವವರ್ಷ ಕಾಲದ ಮಳೆಯ ಬಿರುಸು ನೋಡಲು
ಮತ್ತದರ ಜೊತೆಗೆ ಬರುವ
ಗುಡುಗು ಸಿಡಿಲುಗಳ ಆರ್ಬಟವ
ನೋಡಿ ಪುಳಕಗೊಳ್ಳಲೆನಗೆ ಸಮಯವಿಲ್ಲ
ಬರದ ಮಲ್ಲಿಗೆಯ ಸು
ವಾಸನೆಯ ಆಗ್ರಾಹನೆಗೆ
ಮತ್ತದರ ಸಾಂದ್ರತೆಗೆ,
ತಲೆದೂಗಲೆನಗೆ,
ವೈಶಾಖ ಹೂಗಳ ಗಂಧಕ್ಕೆ
ಮತ್ತವುಗಳ ಮದುರ ಸ್ಪರ್ಶಕ್ಕೆ
ಮನಸೋಲಲೆನಗೆ ಸಮಯವಿಲ್ಲ
ವಸಂತ ಋತುವಿನಲ್ಲಿ
ಕೆಂಪು ಚಿಗುರೆಲೆ ಬಿಡುವ
ಮಾಮರದ ಸ್ವಂತ
ಉತ್ಸಾಹವನ್ನು ನೋಡಲೆನಗೆ,
ಮತ್ತದರ ಉಧರದೊಳಗೆ
ಕುಳಿತು ಕೂಗುವ ಕೋಗಿಲೆಯ ದನಿಗೆ
ಕಿವಿಗೊಡಲೆನಗೆ ಸಮಯವಿಲ್ಲ
ತೀರದಲಿ ನೊರೆಹಾಲು ಚಿಮ್ಮಿಸುತ್ತಾ
ತೆರೆಯೇಬ್ಬಿಸಿ ಕುಣಿದಾಡುವ
ಸಾಗರದ ಉನ್ಮತ್ತ ಅಲೆಗಳನ್ನು,
ಮತ್ತದರ ಸನಿಹದಲ್ಲಿ ಕುಳಿತು
ಪಿಸುಗುಟ್ಟುತಿರುವ ಪ್ರೇಮಿಗಳ
ಲವಲವಿಕೆಯನ್ನು ನೋಡಲು
ನನಗೆ ಸಮಯವಿಲ್ಲ
ಚಿಟ್ಟೆಗಳ ಗಾಢ ಮೈ ಬಣ್ಣವ
ಮುಟ್ಟಿ ಮುಟ್ಟಿ ಆಶ್ಚರ್ಯಗೊಳ್ಳಲು
ಮತ್ತದರ ನವಿರು ಪುಕ್ಕಗಳ
ಮ್ರದುವಾಗಿ ಸವರಿ
ಕುಶಲವ ಕೇಳಲು
ನನಗೆ ಸಮಯವಿಲ್ಲ
ಹಸಿ ಬಾಣಂತಿಯ ಹೊಸಕೂಸಿನ
ನೊಸಲಿನ ಸುವಾಸನೆಯ
ಸುಗಂಧದ ಆಗ್ರಹನೆಗೆ
ಮತ್ತದರ ಅಳುವ ದನಿಗೆ
ಓಗೊಡಲೆನಗೆ ಸಮಯವಿಲ್ಲ
ಏಕಾಂತದಲಿ ನನ್ನ ನಲ್ಲೆಯು
ಚುಂಬಿಸಲು ಕರೆಯುತಿರೆ
ಬಿಡುವಾಗಿ ಬರಲೆನಗೆ,
ಮತ್ತವಳ ರೇಷಿಮೆಯ ಜಡೆಗೆ
ಮಲ್ಲಿಗೆ ಹೂಗಳ ತಂದು
ಮುಡಿಸಲೆನಗೆ ಸಮಯವಿಲ್ಲ
ನನಗೆ ಸಮಯವಿಲ್ಲ
ಗುರುವಾರ, ಮೇ 20, 2010
ಎಲ್ಲರತಲ್ಲ ನನ್ನ ಪ್ರಿಯತಮೆ ಬೇರೆಯೇ
ಎಲ್ಲರತಲ್ಲ ನನ್ನ
ಪ್ರಿಯತಮೆ ಬೇರೆಯೇ
ಸಿಟ್ಟು ಸಿಡುಕು ಅವಳಲಿಲ್ಲ
ನಿತ್ಯ ಶಾಂತ ಮೂರ್ತಿಯೇ
ನನ್ನ ಚಿನ್ನ ರನ್ನ ಅವಳು
ನನ್ನ ಪ್ರೇಮ ಮಲ್ಲಿಗೆ
ಕಣ್ಣ ನೋಟದಿಂದ ಅವಳು
ನನ್ನ ಕರೆವಳು ಮೆಲ್ಲಗೆ
ಕಮಲದಂತೆ ಅಗಲವಿಹುದು
ಅವಳ ಚಂದ್ರ ಮೊರೆಯು
ದಾಳಿಂಬೆ ಬಿಜದಂತೆ
ಅವಳ ದಂತ ಪಂಕ್ತಿಯು
ಹಂಸದಂತೆ ಅವಳ ನೆಡೆಯು
ನುಡಿಯು ಬಹಳ ಮದುರವು
ಮೈಯ ಮಾಟ ಲತೆಗಳಂತೆ
ಹವಳದಂತೆ ಅಧರವು
ಪ್ರಿತಿಮದಿದಾಗಿನಿಂದ
ಕಾಣಲಿಲ್ಲ ಮುನಿಸನು
ಒಲವು ಹೀಗೆ ಇರಲಿ ಎಂದು
ಕಾಣುತಿರುವೆ ಕನಸನು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)

