ಗುರುವಾರ, ಮೇ 20, 2010

ಎಲ್ಲರತಲ್ಲ ನನ್ನ ಪ್ರಿಯತಮೆ ಬೇರೆಯೇ



ಎಲ್ಲರತಲ್ಲ ನನ್ನ
ಪ್ರಿಯತಮೆ ಬೇರೆಯೇ
ಸಿಟ್ಟು ಸಿಡುಕು ಅವಳಲಿಲ್ಲ
ನಿತ್ಯ ಶಾಂತ ಮೂರ್ತಿಯೇ

ನನ್ನ ಚಿನ್ನ ರನ್ನ ಅವಳು
ನನ್ನ ಪ್ರೇಮ ಮಲ್ಲಿಗೆ
ಕಣ್ಣ ನೋಟದಿಂದ ಅವಳು
ನನ್ನ ಕರೆವಳು ಮೆಲ್ಲಗೆ

ಕಮಲದಂತೆ ಅಗಲವಿಹುದು
ಅವಳ ಚಂದ್ರ ಮೊರೆಯು
ದಾಳಿಂಬೆ ಬಿಜದಂತೆ
ಅವಳ ದಂತ ಪಂಕ್ತಿಯು

ಹಂಸದಂತೆ ಅವಳ ನೆಡೆಯು
ನುಡಿಯು ಬಹಳ ಮದುರವು
ಮೈ ಮಾಟ ಲತೆಗಳಂತೆ
ಹವಳದಂತೆ ಅಧರವು

ಪ್ರಿತಿಮದಿದಾಗಿನಿಂದ
ಕಾಣಲಿಲ್ಲ ಮುನಿಸನು
ಒಲವು ಹೀಗೆ ಇರಲಿ ಎಂದು
ಕಾಣುತಿರುವೆ ಕನಸನು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ