ಸೋಮವಾರ, ಮೇ 24, 2010

ನಿನ್ನ ನೆನಪಲ್ಲಿ

ನಿನ್ನ ನೆನಪಲ್ಲಿ ನಮ್ಮ ಬದುಕು
ಹಸನಾಯಿತು ಚೇತನವೇ
ಚೈತ್ರದ ಚಿಗುರಿನಂತೆ

ಕೋಟಿ ಹ್ರದಯವ ಮೀಟಿ
ಕಹಳೆಯೂದಿದೆ ನೀನು
ದೇಶಭಕ್ತಿ ಸ್ಪುರಿಸುವಂತೆ

ಅರಳಿತು ನಮ್ಮೀ ಬದುಕು
ನಿನ್ನಾಗಮನದಿಂದ
ಕತ್ತಲ ದಾರಿಗೆ ಬೆಳಕ ಸೊಡರ ಹಿಡಿದಂತೆ

ಕುಣಿಕುಣಿಯಿತೆಮ್ಮ ಹ್ರದಯ
ಸ್ವಾತಂತ್ರದ ಕಂಪು ತಂದಾಗ ನೀ
ನವೀನ ಪತಥವ ತುಳಿದಂತೆ

ಓಲಾಡಿತು ನಮ್ಮೀ ತನುವು
ಆಶಾಕಿರಣವಾಗಿ ನೀ ಬರಲು
ಬದುಕುವ ಹೊಸ ಉತ್ಸಾಹ ಹುಟ್ಟಿದಂತೆ

ನಿಮ್ಮ ಹೋರಾಟದಲಿ ನಮ್ಮ ಬಾಳು
ಹಸನಾಯಿತು
ಪುಟವಿಟ್ಟ ಬಂಗಾರದಂತೆ

ನಿಮ್ಮೊಲವಿನ ಮುಂಗಾರಿನಲಿ
ನಲಿಯುತಿರುವ ನಾವುಗಳು
ಸಲುಟ್ಟ ಭೂಮಿಯಂತೆ

(ಗಾಂದಿಜಿಯ ಆದರ್ಶಗಳು, ಸ್ವಾತಂತ್ರ್ಯಕ್ಕಾಗಿ ಅವರ ಅಹಿಂಸಾ ಚಳುವಳಿಗಳು, ಅವರ ರಾಮ ರಾಜ್ಯದ ಕಲ್ಪನೆಗಳು, ಸದ್ರಸುಸಂಸ್ಕ್ರತ ಭಾರತ ಪ್ರತಿಪಲವೇ ಆಗಬೇಕು ಎನ್ನುವುದೇ ಕವನದ ಆಶಯ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ