ಸೋಮವಾರ, ಮೇ 24, 2010

ಬರ

ವಿಷಾನಿಲಗಳ ಅಭಿಷೇಕಕೆ
ಬರಡಾಯಿತು ನೆಲವು
ಧಗೆಯೆದ್ದಿದೆ ಹ್ರದಯಗಳಲ್ಲಿ
ಬರಿದಾಯಿತು ಒಲವು

ಬಾಯಾರಿದ ಬಯಕೆಗಳಲ್ಲಿ
ಒತ್ತರಿಸಿದ ಕಣ್ಣಿರು
ಕಣ್ಣಿಗೆ ರಪ್ಪನೆ ಕೊರೈಸುತಿದೆ
ನೆಲದಲಿ ಬಿಸಿಯುಸಿರು

ಮೈಮನಗಳ ಕೊಂಬೆಯಲಿ
ಹೊಗೆಯಾಡುತಿದೆ ನೋವು
ಬಾಡುತಿದೆ ನಾಳೆಗೆ
ನನಸಾಗುವ ಹೂವು

ಬರವಸೆಯ ಹೊಳಗಳಲಿ
ರುಧಿರ ಧಾರೆಯ ಹೊನಲು
ಕವನವಗದು ಇಲ್ಲಿ
ಬತ್ತುತೆದೆ ಕಲ್ಪನೆಯ ಕಡಲು

(ಜಾಗತೀಕರಣ ಮತ್ತು ಉದಾರೀಕರಣ ನೀತಿಯಿಂದಾಗಿ ಇವತ್ತು ಭಾರತದ ಬೆನ್ನೆಲುಬು ಮತ್ತು ಬಹುಸಂಖ್ಯಾ ಜನರ ಪ್ರಮುಕ
ಉದ್ಯೋಗವಾಗಿರುವ ಕ್ರಷಿಭೂಮಿ ಇಂದು ವಿಷಾಲಿನದ ಪಾತ್ರೆಯಗಿದೆ. ಅದಿಕ ಬೆಳೆಯ ಆಶೆಗೆ ರೈತ ಸಾಂಪ್ರದಾಯಕವಾಗಿಬಳಸುತ್ತಿದ್ದ ಸಾವಯವ ಗೊಬ್ಬರಗಳನ್ನು ಬಿಟ್ಟು ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಸಕ ಬಳಸುತ್ತಿರುವ ಪರಿಣಾಮವಾಗಿಇವತ್ತು ಭೂಮಿ ತನ್ನ ಪಲವತ್ತತೆಯನ್ನು ಕಳೆದುಕೊಂಡು ಬಂಜರಾಗಿದೆ. ಇನ್ನಾದರೂ ರೈತ ಸಾವಯವ ಗೊಬ್ಬರದ ಮಹತ್ವತಿಳಿಯಲಿ ಎಂಬುದೇ ಕವನದ ಆಶಯ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ