ಭಾನುವಾರ, ಮೇ 23, 2010

ಮಲೆನಾಡಿನ ಮಳೆಹಾಡು

ಹಾಡು ಹಗಲಲ್ಲೇ ಕತ್ತಲಾವರಿಸಿದಂತೆ
ಭುವಿ ಬಾನು ಒಂದಾಗಿಸುವ ಮಳೆ
ಬಣ್ಣ ಬಣ್ಣದ ಕೊಡೆಗಳ ಮಾಟ
ಅಲ್ಲಲ್ಲಿ ಗೊರಬೆಗಳ ನೋಟ

ನಗರದ ಜನಜೀವನಕ್ಕಿದು ಅಸ್ತವ್ಯಸ್ತ
'ರೇನ್ ವಾಟ್ ನಾನ್ಸೆನ್ಸ್' ಅಂತೆಲ್ಲ
ಹೈ ಪೈ ಗಳಿಂದ ಬೈಸಿಕೊಳ್ಳುವ ವರುಣ
ರಾಜಧಾನಿಯಿಂದ ಮರೆಯಾಗಿ ಕಂಡುಕೊಳ್ಳುವುದು
ಮಲೆನಾಡಿನಲ್ಲಿಯೇ ಅದರ ಅಸ್ತಿತ್ವ

ಮಾರ್ಚ್, ಎಪ್ರಿಲ್, ಮೇ
ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು
ಮಹಾನಗರಗಳಿಗೆ ಟೂರು ಹೋಗುವುದು ನೋಡಿ
ಎಲ್ಲಿ ಸುತ್ತಾಡಿದರು ಕೊನೆಗೆ
ಜೂನ್, ಅಗಸ್ಟ್ ವರೆಗೆ
ಚಿಕ್ಕಮಗಳೂರು,ಶಿವಮೊಗ್ಗದಂತ
ಮಲೆ ಪ್ರದೇಶಗಳಲ್ಲೇ ಠಿಕಾಣಿ ಹೂಡುವುದು ರೂಡಿ

ಮಳೆ ಇಲ್ಲದಿದ್ದರೆ ಮಲೆನಾಡಿಗೆ
ಯಾರಿಗೂ ಬೇಡ ಅವರ ಪಾಡು
ಅಲ್ಲಿ ಮಲೆಹಾಡಿನ ಬದಲಿಗೆ ಗೋಳಿನ ಹಾಡು
ಬಿಳುತ್ತಿರುವಂತೆಯೇ ಒಂದೆರಡು ಮಳೆ
ಅಟ್ಟದ ಮೇಲಿಂದ ವರ್ಷದ ಹಿಂದೆ ಇಟ್ಟಿದ್ದ
ದೂಳು ಮೆತ್ತಿದ್ದ ಕೊಡೆ ಈಚೆಗೆ ಬರುತ್ತದೆ

ಬಟನ್ ಶೂ, ರೇನ್ ಕೊಟ್ ಗಳೆಲ್ಲ
ಹಳ್ಳಿಯ ಹೈಟೆಕ್ ಗಳಾಗಿ ಕಂಗೊಳಿಸುತ್ತವೆ
ಮಳೆಯ ನಡುವೆ ವಿಜ್ರಂಬಿಸುತ್ತವೆ ತರುಣರಲ್ಲಿ
ಗೊರಬೆ, ಪ್ಲಾಸ್ಟಿಕ್ ಹಾಳೆ, ಮಟ್ಟಾಳೆ ಗಳಂತ
ಹಳೆಯ ಪಳೆಯುಳಿಕೆಗಳು ಇಂದಿಗೂ
ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ ಹಳಬರಲ್ಲಿ

ಭೂರಮೆಯ ಒಡಲೊಳಗೆ ಪ್ರೀತಿಯ ಸಿಹಿ ಚುಂಬನ
ಕಾಡಿನ ಮರಗಳಲ್ಲಿ ಮಳೆನೀರು ಅಮ್ರತ ಸಿಂಚನ
ಜೀರುಂಡೆಗಳ ಕೂಗು ಮಳೆ ಬರುವ ಸಿಗ್ನಲ್
ಬಬ್ಬರಿಗಳು ನುಡಿಸುವುದು ಗದ್ದಲದ ವಾದ್ಯ
ಕಪ್ಪೆಗಳ ವಟವಟ ಮರಕುಟಕದ ಕಟಕಟ
ಮುಂಗಾರಿನ ಮೋಡಕ್ಕೆ ಕುಣಿಯುವ
ನವಿಲುಗಳ ಪ್ಯಾಶನ್ ಪ್ರದರ್ಶನ

ಅಜ್ಜನಿಗೆ ಬೇಕು ಒಂದಿಸ್ಟು ನಶ್ಯ
ಬಿಸಿ ಇನ್ನು ಬೇಕಿದ್ದರೆ ಹಾಕಬಹುವುದು
ಒಂದೆರೆಡು ಪೆಗ್ ಅದು ಬೇರೆ ವಿಷ್ಯ
ಅಜ್ಜೆ ಮಾತ್ರ ಈಚೆಗೆ ಬರಲಾರಳು
ಒಲೆ ಮುಂದಿನ ಬೆಂಕಿಯಿಂದ
ಇಲೆಕ್ಟ್ರಿಕ್ ಓವನ್, ಗ್ಯಾಸ್ ಸ್ಟವ್ ಅದೆಸ್ಟು ಬಂದರೂ
ಮಲೆನಾಡಿನ ಅಜ್ಜಿಗೆ ಕೂರಬೇಕು
ಹಳೆಕಾಲದ ಬೆಂಕಿ ಒಲೆಯ ಮುಂದೆ

ಒಲೆಗೆ ಹಾಕಿದರೆ ಹಲಸಿನಕಾಯಿ ಬೀಜ
ತಿಂದರೆ ಆಹಾ! ಎಂತಾ ಮಜಾ
ಇಂತ ರುಚಿ ನಗರದ ಪಿಜ್ಜಕ್ಕೆಲ್ಲುಂಟು?
ಹಪ್ಪಳದ ಸವಿ ಯಾರಿಗೆಲ್ಲ ಗೊತ್ತು
ಸಂಡಿಗೆ, ಬಾಳಕ, ಹಲಸಿನ ಕಡುಬು
ಪತ್ರೋಡೆ, ಹುರುಳಿ ಸಾರು ಬಾಯೂರುವುದು ನೀರು
ಮಾವಿನ ಮಿಡಿ ಉಪ್ಪಿನಕಾಯಿ,
ಜೀರಿಗೆಯ ಕಷಾಯಿ
ಬೇಡ ಬಿಡಿ ಯಾಕೆ ಸುಮ್ಮನೆ
ನಿಮ್ಮ ಹೊಟ್ಟೆ ಉರಿಸುವುದು

ಗುಡುಗು ಸಿಡಿಲು ಮಿಂಚಿನ ಆರ್ಭಟ
ಅವು ಚಂಡೆ ಮದ್ದಲೆಗಳಿದ್ದಂತೆ
ಸದ್ದಿಡುವ ದಿನಗಳಲ್ಲಿ ಬೆಳಕು
ಹರಿಯುವುದೇ ಇಲ್ಲವೆಂಬಂತೆ
ಕತ್ತಲು ಆವರಿಸಿದ ಹೊತ್ತು
ನಾಲ್ಕು ಕಂಬಳಿ ಹೊದ್ದು ಮಲಗಿದರೆ
ಗುಡುಗನ್ನು ನಾಚಿಸುವ ಬೀಕರ ಗೊರಕೆ

ಮಳೆಯ ಅಂದ ಮಲೆನಾಡಿನಲ್ಲಿಯೇ ಚಂದ
ಹಳ್ಳಿಗರಿಗೆ ಅದು ಸಂಭ್ರಮದಾನಂದ
ಕಾನನದ ಸೌಂದರ್ಯ ರಾಶಿ ಸವಿದವರಿಗಷ್ಟೇ ಗೊತ್ತು
ನಗರಿಗರಿಗೆ ಎಲ್ಲುಂಟು ಭಾಗ್ಯ ಇವತ್ತು

(ಮಳೆ ಬಂತೆಂದರೆ ಮಲೆನಾಡಿನಲ್ಲಿ ಹೊಸ ಜಗತ್ತೊಂದು ತೆರೆದುಕೊಳ್ಳುತ್ತದೆ ಮಳೆಯೊಂದಿಗೆ ಅಲ್ಲಿಯ ಜನಜೀವನ , ಸಂಪ್ರದಾಯ, ಸಂಸ್ಕ್ರತಿಗಳು ವೈಶಿಷ್ಟ್ಯತೆಯನ್ನು ಪಡೆದುಕೊಳ್ಳುತ್ತದೆ. ಆದರೆ ನಗರಗಳಲ್ಲಿ ಇದು ಅಸಾದ್ಯ .ನಗರವಾಸಿಗಳ ಜನರ ಬದುಕು ಇಂದು ಯಾಂತ್ರಿಕವಾಗಿದೆ. ಜಾಗತೀಕರಣದ ಪರಿಣಾಮವಾಗಿ ಇದು ಇಂದು ಹಳ್ಳಿಯನ್ನು ಪ್ರವೆಸಿಸುತ್ತಿರುವುದು ವಿಷಾದದ ಸಂಗತಿಯಾಗಿದೆ , ಹಳ್ಳಿಯ ಸೊಗಡು, ಹಳ್ಳಿಯ ಜೀವನ, ಪ್ರಕ್ರತಿಯೊಂದಿಗಿನ ಬಾಂದವ್ಯ ನಗರವಾಸಿಗಳಿಗೆ ಎಲ್ಲಿ ಸಾದ್ಯ? ಪ್ರಕ್ರತಿಯೊಂದಿಗಿನ ಹೊರತಾದ ಬದುಕೂ ಒಂದು ಬದುಕೇ?)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ